Wednesday, February 4, 2026
HomeAlanahalliಅಲನಹಳ್ಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಭವ್ಯವಾಗಿ ಜರುಗಿತು

ಅಲನಹಳ್ಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಭವ್ಯವಾಗಿ ಜರುಗಿತು

ಎಚ್.ಡಿ. ಕೋಟೆ ತಾಲೂಕು ಅಲನಹಳ್ಳಿ ಗ್ರಾಮದಲ್ಲಿ ಜನಪರ ಸಾಹಿತ್ಯ ಪರಿಷತ್ತು (ರಿ) ಬೆಂಗಳೂರು ಹಾಗೂ ಮಹದೇಶ್ವರ ಬೆಟ್ಟ ಮುಖ್ಯ ಕಾರ್ಯದರ್ಶಿ ಎ. ಈ. ರಘು ಅವರ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ, ರಾಜ್ಯಮಟ್ಟದ ಶ್ರೀಕೃಷ್ಣ ಅಲನಹಳ್ಳಿ ಪ್ರಶಸ್ತಿ ಪ್ರಧಾನ, ಮನೆ ಮನೆ ಕವಿಗೋಷ್ಠಿ ಹಾಗೂ ಲಂಚ್ ಬ್ರೇಕ್ ಕಿರು ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಭವ್ಯವಾಗಿ ಜರುಗಿತು.

https://youtu.be/eB81_Ps3zNs


ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು, ಕನ್ನಡಪ್ರಭ ದಿನಪತ್ರಿಕೆ ಮೈಸೂರು ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್, ಮಾಜಿ ಉಪಸಭಾಪತಿ ಹಾಗೂ ವಿಧಾನ ಪರಿಷತ್ತು ಸದಸ್ಯ ಮರಿತಿಬೇಗೌಡ್ರು, ಜನಪರ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಡಾ. ಎಂ. ಮಹೇಶ್ ಚಿಕ್ಕಲ್ಲೂರ್, ಭಾರತೀಯ ಸೇನೆಯ ಪ್ರದಾಶಿಕ ಸೇನಾಧಿಕಾರಿ ಭವ್ಯ ನರಸಿಂಹಮೂರ್ತಿ, ರಾಜ್ಯ ನಿರ್ದೇಶಕ ಶ್ರೀ ಚಂದ್ರಶೇಖರ್ ಎಂ., ಹಾಸ್ಯ ಕಲಾವಿದ ಮೈಸೂರು ಆನಂದ್, ಹಾಗೂ ಹಿರಿಯ ಶ್ರೇಣಿ ಯೋಜನಾ ನಿರ್ದೇಶಕ ಜಿಡಿ ಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ವಿಶೇಷ ಆಹ್ವಾನಿತರಾಗಿ ಶ್ರೀಮತಿ ವಿನುತಾ ಶ್ರೀಕೃಷ್ಣ ಅಲನಹಳ್ಳಿ, ಶ್ರೀ ಪ್ರದ್ಯುಮ್ನ ಶ್ರೀಕೃಷ್ಣ, ಹಾಗೂ ಕುಮಾರಿ ಕೃತಿಕಾ ಶ್ರೀಕೃಷ್ಣ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಲಂಚ್ ಬ್ರೇಕ್ ಕಿರು ಚಿತ್ರದ ಪೋಸ್ಟರ್ ಬಿಡುಗಡೆಯನ್ನು ಶ್ರೀಮತಿ ಕವಿತಾ ರಘು ಅಲನಹಳ್ಳಿ ನೆರವೇರಿಸಿದರು.
ಅಕ್ಕಪಕ್ಕದ ಗ್ರಾಮಸ್ಥರು, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ವಿವಿಧ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಭವ್ಯಗೊಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments