ಹೆಚ್.ಡಿ.ಕೋಟೆ : ಪಟ್ಟಣದ ಹೃದಯ ಭಾಗದಲ್ಲಿರುವ ಡಾಕ್ಟರ್ ಬಾಬು ಜಗಜೀವರಾಂ ಭವನವು ಉದ್ಘಾಟನೆಗೊಳ್ಳದೆ, ಟೆಂಡರ್ ಪ್ರಕ್ರಿಯೆಯೂಗೊಳ್ಳದೆ ಅನಾಥವಾಗಿ ಬಿಕೋ ಎಂದು ನಿಂತಿದೆ.
ತಳ ಸಮುದಾಯಗಳು ಅಭಿವೃದ್ಧಿಯಾಗಲಿ ಎಂದು ಸರ್ಕಾರ ದಲಿತರಿಗೆ ಕೋಟಿ ಕೋಟಿ ಹಣವನ್ನು ವ್ಯಯ ಮಾಡುವ ಸಂದರ್ಭದಲ್ಲಿ ತಾಲೂಕು ಮಟ್ಟದಲ್ಲಿ ರಾಷ್ಟ್ರೀಯ ನಾಯಕ ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರ ಹೆಸರಿನಲ್ಲಿ ನಿರ್ಮಾಣವಾಗಿರುವ ಕೋಟ್ಯಾಂತರ ರೂಪಾಯಿಯ ಭವನವು ಉದ್ಘಾಟನೆಗೊಳ್ಳದೆ ಸಾರ್ವಜನಿಕರ ಉಪಯೋಗಕ್ಕು ಬಾರದೆ ನಿಂತಿರುವುದು ತಾಲೂಕಿಗೆ ಮತ್ತು ಸಮುದಾಯಕ್ಕೆ ಬೇಸರದ ಸಂಗತಿಯಾಗಿದೆ.
ಭವನದ ಸುತ್ತಮುತ್ತ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದು, ಮಧ್ಯಪಾನ ಸೇವಿಸುವುದು ನಡೆಯುತ್ತಿರುವುದರಿಂದ ಸ್ಥಳೀಯರಿಗೆ ಅಸಹ್ಯಕರ ಪರಿಸ್ಥಿತಿ ಉಂಟಾಗಿದೆ.
ಸಾರ್ವಜನಿಕರ ಆಶಯವೆಂದರೆ—ಆದಷ್ಟು ಶೀಘ್ರದಲ್ಲಿಯೇ ತಾಲೂಕು ಶಾಸಕರು, ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಭವನವನ್ನು ಉದ್ಘಾಟಿಸಿ ಕಾರ್ಯರೂಪಕ್ಕೆ ತಂದು, ಸಮುದಾಯದ ಚಟುವಟಿಕೆಗಳಿಗೆ ತಿಲಾಂಜಲಿ ನೀಡಬೇಕು.
