
ಬಿಳಿಕೆರೆ : ದಿನಾಂಕ 12.02.2026 ರ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಐದು ಜನರ ದರೋಡೆ ಗ್ಯಾಂಗ್ ನಂಬರ್ ಪ್ಲೇಟ್ ಇಲ್ಲದ ಒಂದು ಸ್ಕೋಡಾ ಕಾರಿನಲ್ಲಿ ಹುಣಸೂರು ತಾಲೂಕಿನ ಕರಿಮುದ್ದನಹಳ್ಳಿ ಗ್ರಾಮದಲ್ಲಿರುವ ಸ್ವಾಮಿ ಸರ್ವಿಸ್ ಸ್ಟೇಷನ್ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಗೆ ನುಗ್ಗಿ ಪೆಟ್ರೋಲ್ ಬಂಕ್ ನಲ್ಲಿದ್ದ ಇಬ್ಬರು ಸಿಬ್ಬಂದಿಗಳಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ರೂ 15.300/- ಹಣವನ್ನು ದರೋಡೆ ಮಾಡಿಕೊಂಡು ಹೋಗಿದ್ದು, ಈ ಸಂಬಂಧ *ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 53/2026, ಕಲಂ 310(2) ಬಿ ಎನ್ ಎಸ್ ಆಕ್ಟ್* ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ನಂತರ ಶ್ರೀ ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಮೈಸೂರು ಜಿಲ್ಲೆ, ಶ್ರೀ ಮಲ್ಲಿಕ್.ಸಿ ಹಾಗೂ ಶ್ರೀ ನಾಗೇಶ್.ಎಲ್ ಮಾನ್ಯ ಅಪರ ಪೊಲೀಸ್ ಅಧೀಕ್ಷಕರು 1 & 2 ಮೈಸೂರು ಜಿಲ್ಲೆ, ಹಾಗೂ ಶ್ರೀ ರವಿ, ಮಾನ್ಯ ಡಿವೈಎಸ್ಪಿ ಹುಣಸೂರು ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ *ಶ್ರೀ ಟಿ.ಎಂ.ಪುನೀತ್, ಪೊಲೀಸ್ ಇನ್ಸ್ಪೆಕ್ಟರ್ ಬಿಳಿಕೆರೆ ಠಾಣೆ ರವರ ನೇತೃತ್ವದ ತಂಡವು* ಆರೋಪಿತರ ಬಗ್ಗೆ ಮಾಹಿತಿ ಬಗ್ಗೆ ಸಂಗ್ರಹಿಸಿ ದಿನಾಂಕ 06.03.2026 ರಂದು ಮೈಸೂರಿನ ಹಿನಕಲ್ ಫ್ಲೈ ಓವರ್ ಬಳಿಯ ಗೌಡ್ರು ಫೋರ್ಕ್ ಹೋಟೆಲ್ ಕಟ್ಟಡದಲ್ಲಿದ್ದ 01) ಹಾಸನ ಮೂಲದ ಕಿರಣ್ (30 ವರ್ಷ), 02) ಮಂಡ್ಯದ ಲಕ್ಷ್ಮಣ (32 ವರ್ಷ) ಹಾಗೂ 03) ಹುಣಸೂರು ತಾಲ್ಲೂಕಿನ ಕಿರಿಜಾಜಿ ಗ್ರಾಮದ ಉಮೇಶ (32 ವರ್ಷ) ಎಂಬ ಮೂರು ಜನ ಡಕಾಯಿತರನ್ನು ಬಂಧಿಸಿ, ಆರೋಪಿತರು ಕೃತಕ್ಕೆ ಉಪಯೋಗಿಸಿದ ರೂ 3.75000/- ಅಂದಾಜು ಮೌಲ್ಯದ KA-51 MD-9565 ನಂಬರಿನ ಸ್ಕೋಡಾ ಕಾರು, ರೂ 3200/- ನಗದು ಹಣ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನುಳಿದ ಇಬ್ಬರು ಆರೋಪಿತರಾದ ಚನ್ನಪಟ್ಟಣ ಮೂಲದ ರಕ್ಷಿತ್ ಅಲಿಯಾಸ್ ರಕ್ಷಿ ಜಯಂತ್ @ ಅಭಿ @ ಚೌ ಚೌ ರವರು ಈಗಾಗಲೇ ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ಠಾಣೆಯ ಪ್ರಕರಣವೊಂದರಲ್ಲಿ ಬಂಧಿತರಾಗಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬಿಳಿಕೆರೆ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಶ್ರೀಮತಿ ಇಷರತ್ ಬೇಗಂ, ಸಿಬ್ಬಂದಿಯವರುಗಳಾದ ಪ್ರತಾಪ್, ಶಶಿಕುಮಾರ್, ಜಯರಾಮ, ನಾಗಾರ್ಜುನ, ಅಶೋಕ್ ಕುಮಾರ್, ಶಿವಕುಮಾರ, ಪ್ರಸಾದ್ ಧರ್ಮಾಪುರ, ಜಿಲ್ಲಾ ಟೆಕ್ನಿಕಲ್ ಶಾಖೆಯ ವಸಂತ್ ಕುಮಾರ್, ಸುನೀತಾ ಹಾಗೂ ಜೀಪ್ ಚಾಲಕ ಗೋವಿಂದ ರವರು ಭಾಗವಹಿಸಿದ್ದರು.
