Monday, February 2, 2026
HomeMysuruಶಾಸಕ ಹರೀಶ್‌ಗೌಡರ ವಿರುದ್ಧ ಇಲ್ಲ-ಸಲ್ಲದ ಆರೋಪ ಡಾ.ಸುಶುತ್‌ಗೌಡರಿಗೆಕಾಂಗ್ರೆಸ್‌ ಮುಖಂಡರ ತರಾಟೆ

ಶಾಸಕ ಹರೀಶ್‌ಗೌಡರ ವಿರುದ್ಧ ಇಲ್ಲ-ಸಲ್ಲದ ಆರೋಪ ಡಾ.ಸುಶುತ್‌ಗೌಡರಿಗೆಕಾಂಗ್ರೆಸ್‌ ಮುಖಂಡರ ತರಾಟೆ

ಮೈಸೂರಿನ ಚಾಮರಾಜ ಕ್ಷೇತ್ರದ ಇಂದಿರಾಗಾಂಧಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮೈಸೂರು, ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡರ ಬಗ್ಗೆ ಆರೋಪ ಮಾಡುವ ಡಾ.ಸುಶ್ರುತ್‌ಗೌಡರು ಮೊದಲು ವಿಷಯ ತಿಳಿದುಕೊಳ್ಳಬೇಕು. ಇಲ್ಲ-ಸಲ್ಲದ ಆರೋಪ ಮಾಡಬಾರದು ಎಂದು ಕ್ಷೇತ್ರದ ಇಂದಿರಾ ಗಾಂಧಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು ಎಚ್ಚರಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹ ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ರಾಜಕಾರಣದಲ್ಲಿ ಬಹಳ ಉನ್ನತ ಮಟ್ಟಕ್ಕೆ ಹೋಗಬೇಕೆನ್ನುವ ಭರ ದಲ್ಲಿ ಇಲ್ಲ ಸಲ್ಲದ ಆರೋಪ ಮಾಡಬಾರದು ಎಂದು ಸಲಹೆ ನೀಡಿದರು.ಈಗ ತಾನೆ ರಾಜಕೀಯದಲ್ಲಿ ಹೆಜ್ಜೆ ಇಡುತ್ತಿರುವ ಡಾ.ಸುಶ್ರುತ್‌ಗೌಡರು, ಇನ್ನು ಮುಂದಾದರೂ ಎಚ್ಚರಿಕೆಯಿಂದ ಮಾತ ನಾಡಬೇಕು. ಶಾಸಕ ಹರೀಶ್‌ಗೌಡರ ಬಗ್ಗೆ ತಿಳಿದುಕೊಂಡು ಹೇಳಿಕೆಗಳನ್ನುನೀಡಬೇಕು ಎಂದರು.ಹರೀಶ್ ಗೌಡ ಅವರು ಶಾಸಕರಾಗಿಆಯ್ಕೆಯಾದ ನಂತರ ಚಾಮರಾಜ ಕ್ಷೇತ್ರಕ್ಕೆ ಸರ್ಕಾರದಿಂದ ಬಹಳಷ್ಟು ಅನು ದಾನ ತಂದು ಹಲವು ಜನಪರ ಯೋಜನೆ ಕಾರ್ಯಗತಗೊಳಿಸಿದ್ದಾರೆ. ಈ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ಉದ್ಯೋಗ ಮೇಳ, ಆರೋಗ್ಯ ಮೇಳ, ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ ಸೇರಿದಂತೆ ಹಲವು ಜನೋಪ ಯೋಗಿ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆ ಯಲ್ಲಿ ಹರೀಶ್‌ ಗೌಡರ ಬಗ್ಗೆ ಆಧಾರರಹಿತ ಆರೋಪ ಮಾಡಬಾರದು ಎಂದುಡಾ.ಸುಶ್ರುತ್ ಗೌಡರಿಗೆ ಸಲಹೆ ನೀಡಿದರು.ದೇವರಾಜ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ನಾಗಭೂಷಣ್, ಎಸ್ಸಿ ವಿಭಾಗದ ಅಧ್ಯಕ್ಷ ಕೆ.ರಮೇಶ್ ಇನ್ನಿತರರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮೈಸೂರಿನ ಚಾಮರಾಜ ಕ್ಷೇತ್ರದ ಇಂದಿರಾ ಗಾಂಧಿ ಅಧ್ಯಕ್ಷ ರವಿ ಮಂಚೇಗೌಡನ್ ಕೊಪ್ಪಲು ಪತ್ರಿಕಾಗೋಷ್ಠಿ ಎಲ್ಲಿ ಮಾತನಾಡಿದರು ಡಾ. ಸುಶ್ರುತ್ ಗೌಡ ಹರೀಶ್ ಗೌಡರ ಬಗ್ಗೆ ಇಲ್ಲಸಲ್ಲದ ಮಾತುಗಳ ಆಡಿದ ಬಗ್ಗೆ ಪತ್ರಿಕೆಗೋಷ್ಠಿಯನ್ನು ನಡೆಸಲಾಯಿತು ರವಿ ಮಂಚೇಗೌಡನ್ ಕೊಪ್ಪಲು ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments