Wednesday, February 4, 2026
HomeBengaluruCricketIPL Retention: ಲಿವಿಂಗ್ಸ್ಟೋನ್, ಅಗರ್ವಾಲ್ ಸೇರಿ 8 ಆಟಗಾರರನ್ನ ರಿಲೀಸ್ ಮಾಡಿದ RCB: ಇಲ್ಲಿದೆ ನೋಡಿ...

IPL Retention: ಲಿವಿಂಗ್ಸ್ಟೋನ್, ಅಗರ್ವಾಲ್ ಸೇರಿ 8 ಆಟಗಾರರನ್ನ ರಿಲೀಸ್ ಮಾಡಿದ RCB: ಇಲ್ಲಿದೆ ನೋಡಿ ರಿಲೀಸ್-ರಿಟೇನ್ ಮಾಡಿದ ಆಟಗಾರರ ವಿವರ

IPL RCB RELEASE LIST

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ಆಟಗಾರರನ್ನ ಬಿಡುಗಡೆ ಮಾಡಿದೆ. ಕನ್ನಡಿಗರಾದ ಮಯಾಂಕ್ ಅಗರ್ವಾಲ್, ಮನೋಜ್ ಬಾಂಡಗೆ ಈ ಲಿಸ್ಟ್ನಲ್ಲಿ ಸೇರಿದ್ದಾರೆ

IPL 2026 ರ ಮಿನಿ ಹರಾಜಿನ ಮೊದಲು, ಎಲ್ಲಾ 10 ಫ್ರಾಂಚೈಸಿಗಳು ಇಂದು ತಮ್ಮ ರಿಟೇನ್ ಹಾಗೂ ರಿಲೀಸ್ ಮಾಡಿ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸ್ಯಾಮ್ಸನ್ ಮತ್ತು ಜಡೇಜಾ ಅವರಂತಹ ದೊಡ್ಡ ಆಟಗಾರರು ನೇರವಾಗಿ ಟ್ರೇಡ್ ಆದರೆ, ರವಿ ಬಿಷ್ಣೋಯ್, ಆ್ಯಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್ ಸೇರಿ ಸ್ಟಾರ್ ಆಟಗಾರರನ್ನ ಫ್ರಾಂಚೈಸಿಗಳು ರಿಲೀಸ್ ಮಾಡಿವೆ

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ಆಟಗಾರರನ್ನ ಬಿಡುಗಡೆ ಮಾಡಿದೆ. ಇದರಲ್ಲಿ ಕನ್ನಡಿಗರಾದ ಮಯಾಂಕ್ ಅಗರ್ವಾಲ್, ಮನೋಜ್ ಬಾಂಡಗೆ ಈ ಲಿಸ್ಟ್ನಲ್ಲಿ ಸೇರಿದ್ದಾರೆ. ಇನ್ನು 17 ಆಟಗಾರರನ್ನ ರಿಟೇನ್ ಮಾಡಿಕೊಂಡಿದೆ.

ಐಪಿಎಲ್ 2026ರ ಹರಾಜಿಗೂ ಮುನ್ನ ಆರ್ಸಿಬಿ ಸ್ವಸ್ತಿಕ್ ಚಿಕಾರಾ, ಮಯಾಂಕ್ ಅಗರ್ವಾಲ್, ಟಿಮ್ ಸೀಫರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಮನೋಜ್ ಭಾಂಡಗೆ, ಲುಂಗಿ ಎನ್‌ಗಿಡಿ, ಬ್ಲೆಸ್ಸಿಂಗ್ ಮುಜರಾಬಾನಿ, ಮೋಹಿತ್ ರಾಠಿ ಯನ್ನ ರಿಲೀಸ್ ಮಾಡಿದೆ

RCB ಉಳಿಸಿಕೊಂಡಿರುವ ಆಟಗಾರರ ಸಂಪೂರ್ಣ ಪಟ್ಟಿ:ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಸಿಖ್ ಸಲಾಮ್ ಧಾರ್, ಅಭಿನಂದನ್ ಸಿಂಗ್, ಸುಯಾಸ್ ಶರ್ಮಾ.

ಆರ್‌ಸಿಬಿ ತಂಡದಿಂದ ಅತ್ಯಂತ ಗಮನಾರ್ಹವಾದ ಬಿಡುಗಡೆ ಮಾಡಿದ ಆಟಗಾರ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್, ಕಳೆದ ವರ್ಷ ಕಳಪೆ ಪ್ರದರ್ಶನ ನೀಡಿದ ಕಾರಣ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಅವರೊಂದಿಗೆ, ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ ಅವರನ್ನು ಫ್ರಾಂಚೈಸಿಯಿಂದ ಕೈಬಿಡಲಾಯಿತು

ಆರ್ಸಿಬಿ 8 ಆಟಗಾರರನ್ನ ರಿಲೀಸ್ ಮಾಡಿದ ನಂತರ ತಂಡದಲ್ಲಿ 2 ವಿದೇಶಿ ಸ್ಲಾಟ್ ಸೇರಿ ಒಟ್ಟು 8 ಪ್ಲೇಸ್ ಬಾಕಿ ಉಳಿದಿದೆ. ತಂಡದ ಬಳಿ ಇನ್ನೂ 16.4 ಕೋಟಿ ಪರ್ಸ್ ಉಳಿದುಕೊಂಡಿದೆ. ಈ ಹಣದೊಂದಿಗೆ ಮಿನಿ ಹರಾಜಿಗೆ ತೆರಳಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments