Thursday, November 13, 2025
Google search engine
HomeMysuruಶಿವಕುಮಾರ್‌ CM ಆಗಲೇಬೇಕು; ಅನಾಗರಿಕರಂತೆ ವರ್ತಿಸುತ್ತಿರುವ ಪ್ರದೀಪ್ ಈಶ್ವರ್ -ಪ್ರತಾಪ್ ಸಿಂಹನನ್ನು ಒದ್ದು ಒಳಗೆ ಹಾಕಬೇಕು:...

ಶಿವಕುಮಾರ್‌ CM ಆಗಲೇಬೇಕು; ಅನಾಗರಿಕರಂತೆ ವರ್ತಿಸುತ್ತಿರುವ ಪ್ರದೀಪ್ ಈಶ್ವರ್ -ಪ್ರತಾಪ್ ಸಿಂಹನನ್ನು ಒದ್ದು ಒಳಗೆ ಹಾಕಬೇಕು: ವಿಶ್ವನಾಥ್

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಕಟ್ಟಲು ಹಾಗೂ ಕಳೆದ ಚುನಾವಣೆಯಲ್ಲಿ ಅಧಿಕಾರಕ್ಕೆ ತರಲು ಶಿವಕುಮಾರ್‌ ದೊಡ್ಡ ಕೊಡುಗೆ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಯಾಗಲು ಅರ್ಹರಾಗಿದ್ದಾರೆ ಎಂದರು.

ಮೈಸೂರು: ಅಧಿಕಾರ ಹಂಚಿಕೆ ಆಗಲೇಬೇಕು, ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಗಲೇಬೇಕು ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಎ.ಎಚ್. ವಿಶ್ವನಾಥ್‌ ಹೇಳಿದರು.ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಕಟ್ಟಲು ಹಾಗೂ ಕಳೆದ ಚುನಾವಣೆಯಲ್ಲಿ ಅಧಿಕಾರಕ್ಕೆ ತರಲು ಶಿವಕುಮಾರ್‌ ದೊಡ್ಡ ಕೊಡುಗೆ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಯಾಗಲು ಅರ್ಹರಾಗಿದ್ದಾರೆ ಎಂದರು.ಕಳೆದ (2023) ವಿಧಾನಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ವಿಶ್ವನಾಥ್ ಅವರನ್ನು ಹಿಂದಿನ ಬಿಜೆಪಿ ಸರ್ಕಾರ ಬಿ ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಎಂಎಲ್ ಸಿ ಯಾಗಿ ನಾಮನಿರ್ದೇಶನ ಮಾಡಿತ್ತು. ಆದರೆ ಕಳೆದ (2024) ಲೋಕಸಭಾ ಚುನಾವಣೆಯ ನಂತರ ವಿಶ್ವನಾಥ್ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡಲು ಪ್ರಾರಂಭಿಸಿದರು. ಬಿಹಾರ ಚುನಾವಣೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಕುಮಾರ್ ಅವರಿಗೆ ದಾರಿ ಮಾಡಿಕೊಡಬೇಕಾಗುತ್ತದೆ ಎಂಬ ಮಾತುಕತೆಯ ಹಿನ್ನೆಲೆಯಲ್ಲಿ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.ಮಾಜಿ ಸಂಸದ ಪ್ರತಾಪ ಸಿಂಹ–ಶಾಸಕ ಪ್ರದೀಪ್ ಈಶ್ವರ್ ನಡುವಿನ ಹೇಳಿಕೆಗಳ ಜಟಾಪಟಿ ಅಸಹ್ಯ ಮೂಡಿಸುವಂತಿದೆ. ತಾಯಿ ಕುರಿತೆಲ್ಲಾ ಮಾತನಾಡುತ್ತಾರೆ ಎಂದರೆ ಏನರ್ಥ? ಇಂತಹ ಅನಾಗರಿಕ ಹೇಳಿಕೆಗಳು ಹಾಗೂ ಕೀಳುಮಟ್ಟದ ರಾಜಕಾರಣ ಸರಿಯಲ್ಲ. ಅವರಿಬ್ಬರನ್ನೂ ಒದ್ದು ಒಳಗೆ ಹಾಕಬೇಕು ಎಂದು ಕಿಡಿ ಕಾರಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments