ಸಭೆಯ ನೋಡೆಲ್ ಅಧಿಕಾರಿಯಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ್ ಆಗಮಿಸಿದ್ದರು. ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭವಾಗಬೇಕಿದ್ದರೂ, ಪಿಡಿಒ ಸ್ವಾಮಿ ಸಿ., ಕಾರ್ಯದರ್ಶಿ ಪವಿತ್ರ, ಗ್ರಾಮ ಆಡಳಿತಾಧಿಕಾರಿ ಮೇಘ ಸೇರಿದಂತೆ ವಿವಿಧ ಇಲಾಖೆಗಳ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅರ್ಧ ಗಂಟೆ ಕಾಯಿದರು. ನಂತರ ನೋಡೆಲ್ ಅಧಿಕಾರಿ ಮತ್ತಷ್ಟು 15 ನಿಮಿಷ ಕಾಲಾವಕಾಶ ನೀಡಿದರೂ, ಗ್ರಾಮಸ್ಥರು ಸಭೆಗೆ ಬರಲಿಲ್ಲ.
ಇದಾದ ನಂತರ ಅಧ್ಯಕ್ಷೆ ಮಾನಸ ಅವರು ಗ್ರಾಮಸಭೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿದರು. ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೋಭಾಶ್ರೀ ಅವರು ಮುಂದಿನ ಸಭೆಯ ದಿನಾಂಕವನ್ನು ತಕ್ಷಣ ಘೋಷಿಸುವಂತೆ ಒತ್ತಾಯಿಸಿದಾಗ, ನೋಡೆಲ್ ಅಧಿಕಾರಿ ವಾರದೊಳಗೆ ಹೊಸ ದಿನಾಂಕ ನಿಗದಿಪಡಿಸುವ ಭರವಸೆ ನೀಡಿದರು.
ಗ್ರಾಮ ಪಂಚಾಯತಿ ಮಾಜಿ ಸದಸ್ಯ ಬಿ.ಕೆ. ಸತೀಶ್ ಅವರು ಮಾತನಾಡಿ, ಗ್ರಾಮಸಭೆಗೆ ಇಲಾಖಾ ಅಧಿಕಾರಿಗಳನ್ನು ಕಡ್ಡಾಯವಾಗಿ ಕರೆಸುವಂತೆ ಹಾಗೂ ಇಲಾಖಾ ಸೌಲಭ್ಯಗಳ ಕುರಿತು ಜನರಿಗೆ ಮಾಹಿತಿ ನೀಡುವಂತೆ ಆಗ್ರಹಿಸಿದರು.
