Monday, March 9, 2026
HomeUncategorizedಪೆಟ್ರೋಲ್ ಬಂಕ್ ಡಕಾಯಿತಿ ಮಾಡಿದ ಮೂವರ ಬಂಧನ!!

ಪೆಟ್ರೋಲ್ ಬಂಕ್ ಡಕಾಯಿತಿ ಮಾಡಿದ ಮೂವರ ಬಂಧನ!!

ಬಿಳಿಕೆರೆ : ದಿನಾಂಕ 12.02.2026 ರ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಐದು ಜನರ ದರೋಡೆ ಗ್ಯಾಂಗ್ ನಂಬರ್ ಪ್ಲೇಟ್ ಇಲ್ಲದ ಒಂದು ಸ್ಕೋಡಾ ಕಾರಿನಲ್ಲಿ ಹುಣಸೂರು ತಾಲೂಕಿನ ಕರಿಮುದ್ದನಹಳ್ಳಿ ಗ್ರಾಮದಲ್ಲಿರುವ ಸ್ವಾಮಿ ಸರ್ವಿಸ್ ಸ್ಟೇಷನ್ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಗೆ ನುಗ್ಗಿ ಪೆಟ್ರೋಲ್ ಬಂಕ್ ನಲ್ಲಿದ್ದ ಇಬ್ಬರು ಸಿಬ್ಬಂದಿಗಳಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ರೂ 15.300/- ಹಣವನ್ನು ದರೋಡೆ ಮಾಡಿಕೊಂಡು ಹೋಗಿದ್ದು, ಈ ಸಂಬಂಧ *ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 53/2026, ಕಲಂ 310(2) ಬಿ ಎನ್ ಎಸ್ ಆಕ್ಟ್* ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ನಂತರ ಶ್ರೀ ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಮೈಸೂರು ಜಿಲ್ಲೆ, ಶ್ರೀ ಮಲ್ಲಿಕ್.ಸಿ ಹಾಗೂ ಶ್ರೀ ನಾಗೇಶ್.ಎಲ್ ಮಾನ್ಯ ಅಪರ ಪೊಲೀಸ್ ಅಧೀಕ್ಷಕರು 1 & 2 ಮೈಸೂರು ಜಿಲ್ಲೆ, ಹಾಗೂ ಶ್ರೀ ರವಿ, ಮಾನ್ಯ ಡಿವೈಎಸ್ಪಿ ಹುಣಸೂರು ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ *ಶ್ರೀ ಟಿ.ಎಂ.ಪುನೀತ್, ಪೊಲೀಸ್ ಇನ್ಸ್ಪೆಕ್ಟರ್ ಬಿಳಿಕೆರೆ ಠಾಣೆ ರವರ ನೇತೃತ್ವದ ತಂಡವು* ಆರೋಪಿತರ ಬಗ್ಗೆ ಮಾಹಿತಿ ಬಗ್ಗೆ ಸಂಗ್ರಹಿಸಿ ದಿನಾಂಕ 06.03.2026 ರಂದು ಮೈಸೂರಿನ ಹಿನಕಲ್ ಫ್ಲೈ ಓವರ್ ಬಳಿಯ ಗೌಡ್ರು ಫೋರ್ಕ್ ಹೋಟೆಲ್ ಕಟ್ಟಡದಲ್ಲಿದ್ದ 01) ಹಾಸನ ಮೂಲದ ಕಿರಣ್ (30 ವರ್ಷ), 02) ಮಂಡ್ಯದ ಲಕ್ಷ್ಮಣ (32 ವರ್ಷ) ಹಾಗೂ 03) ಹುಣಸೂರು ತಾಲ್ಲೂಕಿನ ಕಿರಿಜಾಜಿ ಗ್ರಾಮದ ಉಮೇಶ (32 ವರ್ಷ) ಎಂಬ ಮೂರು ಜನ ಡಕಾಯಿತರನ್ನು ಬಂಧಿಸಿ, ಆರೋಪಿತರು ಕೃತಕ್ಕೆ ಉಪಯೋಗಿಸಿದ ರೂ 3.75000/- ಅಂದಾಜು ಮೌಲ್ಯದ KA-51 MD-9565 ನಂಬರಿನ ಸ್ಕೋಡಾ ಕಾರು, ರೂ 3200/- ನಗದು ಹಣ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನುಳಿದ ಇಬ್ಬರು ಆರೋಪಿತರಾದ ಚನ್ನಪಟ್ಟಣ ಮೂಲದ ರಕ್ಷಿತ್ ಅಲಿಯಾಸ್ ರಕ್ಷಿ ಜಯಂತ್ @ ಅಭಿ @ ಚೌ ಚೌ ರವರು ಈಗಾಗಲೇ ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ಠಾಣೆಯ ಪ್ರಕರಣವೊಂದರಲ್ಲಿ ಬಂಧಿತರಾಗಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬಿಳಿಕೆರೆ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಶ್ರೀಮತಿ ಇಷರತ್ ಬೇಗಂ, ಸಿಬ್ಬಂದಿಯವರುಗಳಾದ ಪ್ರತಾಪ್, ಶಶಿಕುಮಾರ್, ಜಯರಾಮ, ನಾಗಾರ್ಜುನ, ಅಶೋಕ್ ಕುಮಾರ್, ಶಿವಕುಮಾರ, ಪ್ರಸಾದ್ ಧರ್ಮಾಪುರ, ಜಿಲ್ಲಾ ಟೆಕ್ನಿಕಲ್ ಶಾಖೆಯ ವಸಂತ್ ಕುಮಾರ್, ಸುನೀತಾ ಹಾಗೂ ಜೀಪ್ ಚಾಲಕ ಗೋವಿಂದ ರವರು ಭಾಗವಹಿಸಿದ್ದರು.

Previous article
*ಮಕ್ಕಳ ಪ್ರತಿಭೆ ಹೊರಹೊಮ್ಮಲು ವಿಜ್ಞಾನ ವಸ್ತು ಪ್ರದರ್ಶನ ಅಗತ್ಯ ಎಂದು ಕೇಂಬ್ರಿಡ್ಜ್ ಶಾಲೆಯ ಸಂಸ್ಥಾಪಕರಾದ ಶ್ರೀಮತಿ ಇಂದಿರಾ ಬಾಬು ತಿಳಿಸಿದ್ರು*ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ಮಕ್ಕಳಿಂದ ವಿಜ್ಞಾನದ ಬಗ್ಗೆ ವಸ್ತು ಪ್ರದರ್ಶನ ಆಯೋಜನೆ ಮಾಡಲಾಗಿತ್ತು..ವಸ್ತು ಪ್ರದರ್ಶನಕ್ಕೆ ಶಾಲೆಯ ಸಂಸ್ಥಾಪರಾದ ಶ್ರೀಮತಿ ಇಂದಿರಾ ಬಾಬು ಚಾಲನೆ ನೀಡಿ ಮಾತನಾಡಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳು, ಪ್ರಾಕೃತಿಕ ಸಂಪತ್ತು ರಕ್ಷಣೆ, ಐತಿಹಾಸಿಕ ಸ್ಥಳಗಳು, ಬಣ್ಣಗಳ ವರ್ಗೀಕರಣ, ಬೆಳಕಿನ ಶಕ್ತಿ ಬಳಕೆ, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ ಪಕ್ಷಿ ಸಂರಕ್ಷಣೆ, ಹಸಿರು ಯೋಜನೆ, ಆಹಾರ ಪದ್ದತಿ, ಆಧುನಿಕ ಮನುಷ್ಯರ ಜೀವನ ಶೈಲಿ, ಯಂತ್ರಗಳ ಬಳಕೆ ಸೇರಿದಂತೆ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಮಾದರಿಗಳಿಗೆ ಪೋಷಕರು‌ ಮತ್ತು ಶಿಕ್ಷಕರ ಪರಿಶ್ರಮ ಹೆಚ್ಚಾಗಿದೆ.‌ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲೆ ಸಮಾಜ ವಿಜ್ಞಾನ ಬಗ್ಗೆ ಹೆಚ್ಚು ವಿಜ್ಞಾನ ವಿಷಯವಾಗಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ವಿಜ್ಞಾನ ವಸ್ತು ಪ್ರದರ್ಶನ ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದ್ರು..ವಸ್ತು ಪ್ರದರ್ಶನ ಕಣ್ತುಂಬಿಕೊಂಡ ಪೋಷಕರು ಹಾಗೂ ಸಾರ್ವಜನಿಕರು ಮಕ್ಕಳ ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರುಈ ಸಂದರ್ಭದಲ್ಲಿ ಕೇಂಬ್ರಿಡ್ಜ್ ಶಾಲೆಯ ಸಂಸ್ಥಾಪಕರಾದ ಶ್ರೀಮತಿ ಇಂದಿರಾ ಬಾಬು, ಮುಖ್ಯ ಶಿಕ್ಷಕರಾದ ಶ್ರೀಮತಿ ದೀಪಾ, ಸಹಾ ಶಿಕ್ಷಕರಾದ ಅನಸೂಯ, ಯಮುನಾ, ರಾಣಿ, ರಕ್ಷಿತಾ, ಕೋಮಲ, ಶುಭ, ಜಯಂತಿ, ಸುಧಾ, ಜ್ಯೋತಿ, ಸವಿತಾ, ಭವ್ಯ, , ಸವಿತಾ, ಅಕ್ಷತಾ, ಸ್ವಾತಿ , ಶೇಕ್ ಶಾವಲ್ಲಿ, ಪ್ರಶಾಂತ್, ರಕ್ಷಿತ್, ಕಾವ್ಯ, ರಕ್ಷಿತಾ, ‌ಮಮತಾ, ಅರ್ಪಿತಾ, ಅರ್ಷಿತಾ, ಮಹದೇವ್, ಸೇರಿದಂತೆ ಶಾಲೆಯ ಮಕ್ಕಳು, ಪೋಷಕರು, ಸೇರಿದಂತೆ ಮತ್ತಿತ್ತರರು ಇದ್ದರರು..
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments