Wednesday, February 11, 2026
HomeKarnatakaMandyaಕೆ ಆರ್ ಪೇಟೆ: ಸರ್ಕಾರಿ‌ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದಲ್ಲಿ‌ ಅಂಗಡಿ ಕಬ್ಬಿಣ ಪೆಟ್ಟಿಗೆ...

ಕೆ ಆರ್ ಪೇಟೆ: ಸರ್ಕಾರಿ‌ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದಲ್ಲಿ‌ ಅಂಗಡಿ ಕಬ್ಬಿಣ ಪೆಟ್ಟಿಗೆ ಪ್ರತ್ಯೇಕ್ಷವಾಗಿದೆ ಎಂದು ಎಂದು ರೈತ ಸಂಘದವರು ಆರೋಪ ಮಾಡಿದರು.ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿರುವ ಹೋಟೆಲ್ ಹಾಗೂ ‌ಟಿ ಸಿ ಕಚೇರಿಯ ನಡುವೆ ಅಂಗಡಿ ಪೆಟ್ಟಿಗೆಯನ್ನು ಇಡಲು ಟೆಂಡರ್ ಕರೆಯಲಾಗಿದೆ. ಆದರೆ ಸಾರ್ವಜನಿಕ ಪ್ರಯಾಣಿಕರು ಓಡಾಡುವ ಕುಳಿತುಕೊಳ್ಳುವ ಜಾಗದಲ್ಲಿ ಕಬ್ಬಿಣ ಅಂಗಡಿ ಪೆಟ್ಟಿಗೆ ಇಟ್ಟಿರುವುದು‌ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಸಾರ್ವಜನಿಕರಿಂದ‌ ದೂರು ಬಂದಿರುವ ಅಂಗವಾಗಿ ಕರ್ನಾಟಕ ರಾಜ್ಯ ರೈತ ಕಾರ್ಮಿಕರ ಹಿತ ರಕ್ಷಣಾ ವೇದಿಕೆಯ‌ ಪದಾಧಿಕಾರಿಗಳು ಬಸ್ ಡಿಪೋ ವ್ಯವಸ್ಥಾಪಕರಿಗೆ,ತಹಶಿಲ್ದಾರ್ ಅವರಿಗೆ, ಪುರಸಭಾ ಅಧಿಕಾರಿಗಳಿಗೆ ಅಂಗಡಿ ಪೆಟ್ಟಿಗೆಯನ್ನು ತೆರವು ಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಮನವಿ ಪತ್ರವನ್ನು ನೀಡಿದರು.ಬಳಿಕ ಮಾತನಾಡಿದ ರಾಜ್ಯ ರೈತ ಕಾರ್ಮಿಕರ ಹಿತ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಮಂಜೇಗೌಡ ಮಾತನಾಡಿ ಈಗಾಗಲೇ ಟೆಂಡರ್ ಪ್ರಕ್ರಿಯೆಯಲ್ಲಿ ನಿಗಧಿ ಪಡಿಸಿರುವ ಅಳತೆಗಿಂತ ಹೆಚ್ಚಿನ ಅಳತೆಯ ಪೆಟ್ಟಿಗೆ ನಿರ್ಮಾಣ ಮಾಡಿದ್ದಲ್ಲದೇ ಸಾರ್ವಜನಿಕರು,ವಿದ್ಯಾರ್ಥಿಗಳು, ವೃದ್ಧರು ಕುಳಿತುಕೊಳ್ಳುವ ಓಡಾಡುವ ಜಾಗದಲ್ಲಿ ಕಬ್ಬಿಣ ಅಂಗಡಿಯನ್ನು ‌ಇಟ್ಟಿರುವ ಸಂಬಂಧಿಸಿದಂತೆ ಸಾರ್ವಜನಿಕರಿಂದ ನಮಗೆ ದೂರು ಬಂದ ಕಾರಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ, ತಹಶಿಲ್ದಾರ್, ಪುರಸಭೆಯ ಅಧಿಕಾರಿಗಳಿಗೆ ‌ಮನವಿ ಪತ್ರವನ್ನು ನೀಡಿದ್ದೇವೆ.ಒಂದು‌ ವಾರದ ಒಳಗಡೆ ಕಬ್ಬಿಣದ ಅಂಗಡಿಯನ್ನು ತೆರವು ಗೊಳಿಸದಿದ್ದರೆ ಇದೇ ಜಾಗದಲ್ಲಿ ಧರಣಿಯನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಕಾರ್ಮಿಕರ ಹಿತ ರಕ್ಷಣಾ ವೇದಿಕೆ ಹಾಸನ ಜಿಲ್ಲಾ ಗೌರವಾಧ್ಯಕ್ಷ ಪ್ರಕಾಶ್,ವೇದಿಕೆ ಸಂಸ್ಥಾಪಕ ಅಧ್ಯಕ್ಷಮಂಜೇಗೌಡ ಬಡಕನಹಳ್ಳಿ,ಜಿಲ್ಲಾಧ್ಯಕ್ಷ ಪುಟ್ಟೇಗೌಡ,ತಾಲ್ಲೂಕು ಅಧ್ಯಕ್ಷ ಗಿರೀಶ್,ಪ್ರಕಾಶ್ ‌ಸೇರಿದಂತೆ ಇತರರು ಹಾಜರಿದ್ದರು.

Previous article
Next article
*ಮಕ್ಕಳ ಪ್ರತಿಭೆ ಹೊರಹೊಮ್ಮಲು ವಿಜ್ಞಾನ ವಸ್ತು ಪ್ರದರ್ಶನ ಅಗತ್ಯ ಎಂದು ಕೇಂಬ್ರಿಡ್ಜ್ ಶಾಲೆಯ ಸಂಸ್ಥಾಪಕರಾದ ಶ್ರೀಮತಿ ಇಂದಿರಾ ಬಾಬು ತಿಳಿಸಿದ್ರು*ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ಮಕ್ಕಳಿಂದ ವಿಜ್ಞಾನದ ಬಗ್ಗೆ ವಸ್ತು ಪ್ರದರ್ಶನ ಆಯೋಜನೆ ಮಾಡಲಾಗಿತ್ತು..ವಸ್ತು ಪ್ರದರ್ಶನಕ್ಕೆ ಶಾಲೆಯ ಸಂಸ್ಥಾಪರಾದ ಶ್ರೀಮತಿ ಇಂದಿರಾ ಬಾಬು ಚಾಲನೆ ನೀಡಿ ಮಾತನಾಡಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳು, ಪ್ರಾಕೃತಿಕ ಸಂಪತ್ತು ರಕ್ಷಣೆ, ಐತಿಹಾಸಿಕ ಸ್ಥಳಗಳು, ಬಣ್ಣಗಳ ವರ್ಗೀಕರಣ, ಬೆಳಕಿನ ಶಕ್ತಿ ಬಳಕೆ, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ ಪಕ್ಷಿ ಸಂರಕ್ಷಣೆ, ಹಸಿರು ಯೋಜನೆ, ಆಹಾರ ಪದ್ದತಿ, ಆಧುನಿಕ ಮನುಷ್ಯರ ಜೀವನ ಶೈಲಿ, ಯಂತ್ರಗಳ ಬಳಕೆ ಸೇರಿದಂತೆ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಮಾದರಿಗಳಿಗೆ ಪೋಷಕರು‌ ಮತ್ತು ಶಿಕ್ಷಕರ ಪರಿಶ್ರಮ ಹೆಚ್ಚಾಗಿದೆ.‌ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲೆ ಸಮಾಜ ವಿಜ್ಞಾನ ಬಗ್ಗೆ ಹೆಚ್ಚು ವಿಜ್ಞಾನ ವಿಷಯವಾಗಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ವಿಜ್ಞಾನ ವಸ್ತು ಪ್ರದರ್ಶನ ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದ್ರು..ವಸ್ತು ಪ್ರದರ್ಶನ ಕಣ್ತುಂಬಿಕೊಂಡ ಪೋಷಕರು ಹಾಗೂ ಸಾರ್ವಜನಿಕರು ಮಕ್ಕಳ ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರುಈ ಸಂದರ್ಭದಲ್ಲಿ ಕೇಂಬ್ರಿಡ್ಜ್ ಶಾಲೆಯ ಸಂಸ್ಥಾಪಕರಾದ ಶ್ರೀಮತಿ ಇಂದಿರಾ ಬಾಬು, ಮುಖ್ಯ ಶಿಕ್ಷಕರಾದ ಶ್ರೀಮತಿ ದೀಪಾ, ಸಹಾ ಶಿಕ್ಷಕರಾದ ಅನಸೂಯ, ಯಮುನಾ, ರಾಣಿ, ರಕ್ಷಿತಾ, ಕೋಮಲ, ಶುಭ, ಜಯಂತಿ, ಸುಧಾ, ಜ್ಯೋತಿ, ಸವಿತಾ, ಭವ್ಯ, , ಸವಿತಾ, ಅಕ್ಷತಾ, ಸ್ವಾತಿ , ಶೇಕ್ ಶಾವಲ್ಲಿ, ಪ್ರಶಾಂತ್, ರಕ್ಷಿತ್, ಕಾವ್ಯ, ರಕ್ಷಿತಾ, ‌ಮಮತಾ, ಅರ್ಪಿತಾ, ಅರ್ಷಿತಾ, ಮಹದೇವ್, ಸೇರಿದಂತೆ ಶಾಲೆಯ ಮಕ್ಕಳು, ಪೋಷಕರು, ಸೇರಿದಂತೆ ಮತ್ತಿತ್ತರರು ಇದ್ದರರು..
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments